Episodes

  • ಎಲ್ಲ ಓಕೆ, ಬಿಯರ್ ಯಾಕೆ? Spirit-ual Stories ft. Pavan Srinath
    Aug 4 2022
    2022 ರಲ್ಲಿ ಭಾರತೀಯರು ಕೇವಲ ಮದ್ಯಪಾನವನ್ನ ಸೇವಿಸುವುದಷ್ಟೇ ಅಲ್ಲ ಜೊತೆಗೆ ಅನೇಕ ಹೊಸ ಬ್ರಾಂಡ್‌ಗಳ ವಿಸ್ಕಿಗಳು, ಜಿನ್‌ಗಳು, ಬಿಯರ್‌ಗಳನ್ನು ನಮ್ಮ ದೇಶದಲ್ಲೇ ಉತ್ಪಾದಿಸುತ್ತಿದ್ದಾರೆ. ಪವನ್ ಶ್ರೀನಾಥ್ ಅವರು ಗಣೇಶ್ ಚಕ್ರವರ್ತಿ ಅವರೊಂದಿಗೆ ಮದ್ಯಪಾನ ಹೇಗೆ ತಯಾರಿಸಲಾಗುತ್ತದೆ, ಅವುಗಳ ಇತಿಹಾಸ ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಉದ್ಯಮವು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡುತ್ತಾರೆ.Indians in 2022 are not just enjoying drinking alcoholic beverages, but are also creating new brands of whiskeys, gins, beers and more that are being celebrated both at home and abroad. Host Pavan Srinath talks to Ganesh Chakravarti about how alcoholic drinks are made, their brief history, and how Indian liquor industry is being transformed in the last 10-15 years.Warning: Consumption of alcohol is injurious to health. Excessive alcohol consumption can lead to addiction as well as various health problems. Do not drink and drive, as you will be putting the safety of you and of others at risk.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ತಲೆ ಹರಟೆ ಕನ್ನಡ ಪಾಡ್‌ಕಾಸ್ಟ್‌ನ 146ನೇ ಸಂಚಿಕೆಯಲ್ಲಿ, ಪವನ್ ಮತ್ತು ಗಣೇಶ್ ಕನಿಷ್ಠ 10,000 ವರ್ಷಗಳಿಂದ ಮಾನವ ಸಮಾಜದ ಭಾಗವಾಗಿರುವ ಮದ್ಯಪಾನದ ತಯಾರಿಕೆ ಮತ್ತು ಸೇವನೆಯ ಕುರಿತು ಚರ್ಚಿಸುತ್ತಾರೆ.ಬಟ್ಟಿ ಇಳಿಸುವಿಕೆಯ ತಂತ್ರಗಳನ್ನು ಬಳಸಿಕೊಂಡು ವಿವಿಧ ಮದ್ಯಪಾನೀಯಗಳನ್ನು ಹೇಗೆ ಉತ್ಪಾದಿಸಲಾಗುತ್ತೆ ಎಂಬುವುದರ ಕುರಿತು ಪವನ್ ಮಾತಾಡುತ್ತಾರೆ. ಭಾರತ, ವಿಶೇಷವಾಗಿ ಸ್ವತಂತ್ರ ಭಾರತ ಸರ್ಕಾರಗಳ, ಮದ್ಯವನ್ನು ನಿಷೇಧಿಸುವ ಅಥವಾ ಹೆಚ್ಚು ತೆರಿಗೆ ವಿಧಿಸುವ ನಿರ್ಣಯದ ಕುರಿತು ಮತ್ತು ಪ್ರತಿ ಹಂತದಲ್ಲೂ ಸರ್ಕಾರ ಇದನ್ನ ನಿಯಂತ್ರಿಸುವ ವಿಷಯದ ಕುರಿತು ಅವರು ಇಲ್ಲಿ ಚರ್ಚಿಸಿದ್ದಾರೆ. ಪವನ್ ಅವರು IMFL ಗಳು ಅಥವಾ "ಭಾರತೀಯ ನಿರ್ಮಿತ ವಿದೇಶಿ ಮದ್ಯಗಳ" ಉತ್ಪಾದನೆಯ ಕುರಿತು ಮತ್ತು ಕಳೆದ 10-15 ವರ್ಷಗಳಲ್ಲಿ ಭಾರತೀಯ ಮದ್ಯ ಕಂಪನಿಗಳು ಹೇಗೆ ರಾಷ್ಟಮಟ್ಟದಲ್ಲಿ ಮತ್ತು ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂದು ತಿಳಿಸಿದ್ದಾರೆ ಜೊತೆಗೆ ಬ್ರಿಟಿಷರಿಂದ ಭಾರತೀಯರಿಗೆ ಪರಿಚಿತವಾದ ಜಿನ್ ಮತ್ತು ಟಾನಿಕ್ ಕುರಿತು ಕೆಲವು ಆಸಕ್ತಿಕರ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ.On Episode 146 of the Thale-Harate Kannada Podcast, hosts Pavan and Ganesh sit down to discuss the brewing, preparation and consumption of alcoholic beverages, an activity that has been a part of human society for at least 10,000 years.Pavan shares how various beverages are created using techniques of fermentation and distillation. He also discusses how India, especially Independent Indian governments have viewed alcohol as something to either be banned, or taxed heavily and controlled in every aspect. He discusses the creation of IMFLs or “Indian Made Foreign Liquors” and how it is only over the last 10-15 years that Indian companies are moving beyond this to make high quality alcoholic beverages and liquors for both Indians and the world. He also shares how his drink of choice is a Gin and Tonic, a mixed drink that developed because of the colonisation of India by the British.ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/ , Twitter: https://twitter.com/HaratePod/ , Instagram: https://instagram.com/haratepod/ and YouTube: https://youtube.com/HaratePod .ಈಮೇಲ್ ಕಳಿಸಿ, send us an email at haratepod@gmail.com or ...
    Show More Show Less
    51 mins
  • ಕಪ್ಪೆಗಳು ಸಾರ್ ಕಪ್ಪೆಗಳು! The Frogs of India ft. Gururaja KV
    Jul 21 2022
    ಕಪ್ಪೆಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿರುವ ಡಾ. ಗುರುರಾಜ ಕೆವಿ ಅವರು ಕಪ್ಪೆಗಳ ಸೌಂದರ್ಯ, ಅದ್ಭುತ ಮತ್ತು ಜೀವಶಾಸ್ತ್ರದ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ಮಾತನಾಡಿದ್ದಾರೆ. ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ 200 ಕ್ಕೂ ಹೆಚ್ಚು ಹೊಸ ಜಾತಿಯ ಕಪ್ಪೆಗಳನ್ನು ಹೇಗೆ ಕಂಡುಹಿಡಿಯಲಾಗಿದೆ ಮತ್ತು ಮುಂಬರುವ ದಶಕಗಳಲ್ಲಿ ಇನ್ನಷ್ಟು ವಿಜ್ಞಾನವನ್ನು ಯಾವ ರೀತಿ ಅನ್ವೇಷಿಸಬೇಕಾಗಿದೆ ಎಂಬುದನ್ನು ಅವರು ಚರ್ಚಿಸಿದ್ದಾರೆ.Batrachologist or Frog expert, Dr Gururaja KV shares the beauty, wonder and the biology of frogs and toads with Pavan Srinath. He shares how over 200 new species of amphibians have been discovered in India just in the last 20 years, and how there is more science to be explored in the coming decades.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ನಮ್ಮಲ್ಲಿ ಹೆಚ್ಚಿನವರು ಪ್ರತೀ ಮಳೆಗಾಲದಲ್ಲಿ ಕಪ್ಪೆಗಳು ವಟರ್ ಗುಟ್ಟುವುದನ್ನು ಕೇಳುತ್ತಲೇ ಬೆಳೆದಿದ್ದೇವೆ ಮತ್ತು ನಮ್ಮ ಮನೆಯ ಸುತ್ತ ಕಪ್ಪೆ ಹಾರುವುದನ್ನು ಕಂಡು ಹೆದರಿದ್ದು ಇದೆ. ಸರೀಸೃಪಗಳು, ಪಕ್ಷಿಗಳು ಮತ್ತು ದೊಡ್ಡ ಸಸ್ತನಿಗಳತ್ತ ಸಾಮಾನ್ಯವಾಗಿ ನಮ್ಮ ಗಮನ ಸೆಳೆಯುತ್ತೆ. ಆದರೆ ನಾವು ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಪರಿಸರದ ಪ್ರಮುಖ ಭಾಗವಾಗಿರುವ ಕಪ್ಪೆಗಳು ಮತ್ತು ನೆಲಗಪ್ಪೆಗಳನ್ನು ನಿರ್ಲಕ್ಷಿಸುತ್ತೇವೆ.ಡಾ ಗುರುರಾಜ ಕೆವಿ ಅವರು ಉಭಯಚರಗಳನ್ನು ಅಧ್ಯಯನ ಮಾಡುವ ವಿಶೇಷ ಆಸಕ್ತಿ ಹೊಂದಿದ್ದು ಜೊತೆಗೆ ಪ್ರಸ್ತುತ ಸೃಷ್ಟಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ ಮತ್ತು ಗುಬ್ಬಿ ಲ್ಯಾಬ್ಸ್‌ನಲ್ಲಿ ಅಡ್ಜಂಕ್ಟ್ ಫೆಲೋ ಆಗಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪಡೆದಿರುವ ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನೆಯನ್ನೂ ಮಾಡಿದ್ದಾರೆ, ಗುರುರಾಜ ಅವರು 20 ವರ್ಷಗಳಿಂದ ಕಪ್ಪೆಗಳು ಮತ್ತು ನೆಲಗಪ್ಪೆಗಳ ಬಗ್ಗೆ ವಿಶೇಷ ಅಧ್ಯಯನ ಮಾಡುತ್ತಿದ್ದಾರೆ.ಭಾರತದಲ್ಲಿ 20 ಕ್ಕೂ ಹೆಚ್ಚು ಹೊಸ ಕಪ್ಪೆ ಜಾತಿಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಗುರುತಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು, ಪಶ್ಚಿಮ ಘಟ್ಟಗಳು ಮತ್ತು ಅದರಾಚೆಗೆ ತಮ್ಮ ಸಂಶೋಧನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್ ನ ಸಂಚಿಕೆ 145 ರಲ್ಲಿ, ಡಾ ಗುರುರಾಜ ಅವರು ಕಪ್ಪೆಗಳ ಮೇಲಿನ ತಮ್ಮ ಪ್ರೀತಿ ಮತ್ತು ಕೌತುಕವನ್ನು ಹಂಚಿಕೊಂಡಿದ್ದಾರೆ, ಈ ಆಕರ್ಷಕ ಜೀವಿಗಳನ್ನು ಅಧ್ಯಯನ ಮಾಡಲು ಅವರಿಗೆ ಪ್ರೇರಣೆ ಏನು? ಹೊಸ ಜಾತಿ ಕಪ್ಪೆಗಳನ್ನುಗಳನ್ನು ಕಂಡುಹಿಡಿಯುವ ಪ್ರಕ್ರಿಯೆ ಯಾವ ರೀತಿ ಇರುತ್ತೆ? ಮತ್ತು ಕಪ್ಪೆಗಳ ನಡವಳಿಕೆ ಯಾವರೀತಿ ಇರುತ್ತೆ? ಎಂಬೆಲ್ಲ ವಿಷಯಗಳನ್ನು ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಬನ್ನಿ ಕೇಳಿ!gururajakv.net ನಲ್ಲಿ ಮತ್ತು ಅವರ ಗೂಗಲ್ ಸ್ಕಾಲರ್ ಪ್ರೊಫೈಲ್‌ನಲ್ಲಿ ಡಾ ...
    Show More Show Less
    1 hr and 17 mins
  • ಬೆಂಗಳೂರಿನ ವಿವಿಧ ಸರ್ಕಾರಿ ಸಂಸ್ಥೆಗಳು. The Many Government Agencies of Bengaluru! ft. Sudhira HS
    Jul 14 2022
    ಕರ್ನಾಟಕದ ಕೆಪಿಟಿಸಿಎಲ್, ಬೆಸ್ಕಾಂ ಮತ್ತು ಬೆಂಗಳೂರಿನ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಟಿಸಿ ಮತ್ತು ಬಿಡಿಎಯಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಹೇಗೆ ವಿಕಸನಗೊಂಡಿವೆ, ಅವು ಹೇಗೆ ಕಾರ್ಯನಿರ್ವಹಿಸುತ್ತಿವೆ ಮತ್ತು ಉತ್ತಮ ನಗರ ಆಡಳಿತಕ್ಕಾಗಿ ಅವುಗಳನ್ನು ಹೇಗೆ ಮರುರೂಪಿಸಬೇಕಾಗಿದೆ ಎಂಬುದರ ಕುರಿತು ಪವನ್ ಶ್ರೀನಾಥ್ ಅವರೊಂದಿಗೆ ನಗರ ಆಡಳಿತ ಸಂಶೋಧಕ ಡಾ ಸುಧೀರ ಎಚ್‌ಎಸ್ ಮಾತನಾಡುತ್ತಾರೆ. Urban Governance researcher Dr Sudhira HS talks to host Pavan Srinath about how various government agencies like Karnataka’s KPTCL, BESCOM and Bengaluru’s BWSSB, BMTC and BDA have evolved – how they are functioning and how they need to be reimagined for good urban governance. He unpacks the plethora of PSUs, Parastatal agencies, SPVs and Boards that have taken over significant aspects of local government.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ಬೆಂಗಳೂರಿನಂತಹ ಮಹಾನಗರವು ಹಲವಾರು ಸರ್ಕಾರಿ ಸಂಬಂಧಿತ ಸಂಸ್ಥೆಗಳನ್ನು ಹೊಂದಿದೆ, ಅದು ಅಗತ್ಯ ಸೇವೆಗಳನ್ನು ಅಥವಾ ನಿವಾಸಿಗಳ ದೈನಂದಿನ ಜೀವನಕ್ಕೆ ಮುಖ್ಯವಾದ ಆಡಳಿತವನ್ನು ಮಾಡುತ್ತದೆ. ಕೆಲವನ್ನು ಹೆಸರಿಸೋದಾದ್ರೆ, ಬೆಂಗಳೂರಿನಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಪೈಪ್‌ಲೈನ್ ನೀರು ಸರಬರಾಜು ಮತ್ತು ಒಳಚರಂಡಿಯನ್ನು ನಿರ್ವಹಿಸುತ್ತದೆ, ಬೆಸ್ಕಾಂ ವಿದ್ಯುತ್ ಸಂಭಂದಿತ ಕೆಲಸಗಳನ್ನ ನೋಡಿಕೊಳ್ಳುತ್ತೆ, ಬಿ.ಎಂ.ಟಿ.ಸಿ ಸಾರ್ವಜನಿಕ ಬಸ್‌ಗಳನ್ನು ನಿರ್ವಹಿಸುತ್ತದೆ, ಬಿ.ಎಂ.ಆರ್.ಸಿ.ಎಲ್ ನಗರ ಮೆಟ್ರೋ ರೈಲನ್ನು ನಿರ್ವಹಿಸುತ್ತದೆ. ಅದೇ ರೀತಿ, ರಾಜ್ಯದಾದ್ಯಂತ ಮೂಲಸೌಕರ್ಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಅನೇಕ ಸಂಸ್ಥೆಗಳಿವೆ. ಬಹುತೇಕ ಎಲ್ಲವೂ ಸ್ಥಳೀಯವಾಗಿ ಚುನಾಯಿತ ಸರ್ಕಾರಗಳಿಂದ ಅಂತರ ಕಾಯ್ದುಕೊಂಡಿದ್ದಾರೆ ಮತ್ತು ಸಾರ್ವಜನಿಕ ಉದ್ದೇಶಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ.ಈ ಸಾರ್ವಜನಿಕ ಏಜೆನ್ಸಿಗಳ ಅವ್ಯವಸ್ಥೆಗಳ ಕುರಿತು ವಿವರಿಸಲು ಸುಧೀರ ಎಚ್‌ಎಸ್ ರವರು ತಲೆ-ಹರಟೆ ಕನ್ನಡ ಪಾಡ್‌ಕಾಸ್ಟ್‌ನ 144 ನೇ ಸಂಚಿಕೆಯಲ್ಲಿ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ವಿದ್ಯುತ್ ಸಂಸ್ಥೆಗಳ ವಿಕಸದ ಕುರಿತು ಮಾತನಾಡುತ್ತಾರೆ ಜೊತೆಗೆ ಸರ್ಕಾರಿ ಸಂಸ್ಥೆಗಳು ವಾಸ್ತವದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ ಹಾಗೆಯೇ ಎಲ್ಲಿ ಮತ್ತು ಹೇಗೆ ವಿಫಲಗೊಳ್ಳುತ್ತವೆ ಎಂಬುವುದನ್ನೂ ವಿವರಿಸುತ್ತಾರೆ. ಅವರು ಕಾರ್ಪೊರೇಟೀಕರಣದ ಮಿತಿಗಳನ್ನು ಮತ್ತು ಆಡಳಿತದಲ್ಲಿ ಅದರ ಪಾತ್ರದ ಕುರಿತು ವಿವರಿಸುತ್ತಾ ಮಾರುಕಟ್ಟೆ ಕಾರ್ಯವಿಧಾನಗಳು ಎಲ್ಲಿ ಉತ್ತಮವಾಗಿ ಅನ್ವಯಿಸಬಹುದು ಮತ್ತು ಎಲ್ಲಿ ವಿಫಲವಾಗಬಹುದು ಎಂದು ಮಾತನಾಡಿದ್ದಾರೆ.ಡಾ ಸುಧೀರ ಎಚ್‌ಎಸ್ ಅವರು ಗುಬ್ಬಿ ಲ್ಯಾಬ್ಸ್‌ನ ನಿರ್ದೇಶಕರಾಗಿದ್ದಾರೆ, ಇದು ಕರ್ನಾಟಕದ ತುಮಕೂರು ಬಳಿಯ ಗುಬ್ಬಿ ಮೂಲದ ಸಂಶೋಧನಾ ಸಂಸ್ಥೆಯಾಗಿದೆ. ಗುಬ್ಬಿ ಲ್ಯಾಬ್ಸ್ ಮ್ಯಾಪಿಂಗ್, ನಗರ ...
    Show More Show Less
    1 hr and 7 mins
  • A Manifesto for Bengaluru Elections | BBMP ಚುನಾವಣಾ ಪ್ರಣಾಳಿಕೆ ft. Kathyayini Chamaraj
    Jul 7 2022
    ನಾಗರಿಕ ಕಾರ್ಯಕರ್ತೆ ಕಾತ್ಯಾಯಿನಿ ಚಾಮರಾಜ್ ಅವರು ನಿಜವಾದ ಸ್ಥಳೀಯ ಮತ್ತು ನಗರ ಪ್ರಜಾಪ್ರಭುತ್ವದ ಅಗತ್ಯತೆಯ ಕುರಿತು ನಿರೂಪಕರಾದ ಪವನ್ ಶ್ರೀನಾಥ್‌ ಅವರ ಜೊತೆ ಮಾತನಾಡುತ್ತಾರೆ ಮತ್ತು ಮುಂಬರುವ 2022 ರ ಬಿಬಿಎಂಪಿ ಚುನಾವಣೆ ಸಂದರ್ಭ ತಮ್ಮ ಸ್ಥಳೀಯ ಕಾರ್ಪೊರೇಟರ್ ಅಭ್ಯರ್ಥಿಗಳಿಗೆ ಬೆಂಗಳೂರಿನ ನಾಗರಿಕರು ಏನೆಲ್ಲಾ ಪ್ರಶ್ನೆ ಕೇಳಬೇಕು ಎಂದು ಚರ್ಚಿಸುತ್ತಾರೆ.Changemaker, activist and civic leader Kathyayini Chamaraj talks to host Pavan Srinath about the need for true local and city democracy, and lays out what Bengaluru’s citizens should ask of their local corporator candidates in the upcoming 2022 BBMP elections.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!'ನಾಗರಿಕ' ಎಂಬ ಪದವು 'ನಗರ'ಕ್ಕೆ ಸಂಭಂದ ಪಟ್ಟದ್ದು, ಇಂಗ್ಲಿಷ್ ನಲ್ಲೂ ಮತ್ತು ಕನ್ನಡದಲ್ಲೂ. ನಮ್ಮಲ್ಲಿ ಅನೇಕರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ ಮತ್ತು ಮತದಾನ ಮಾಡುತ್ತೇವೆ. ಆದರೆ ಇದರಲ್ಲಿ ಕೆಲವೇ ಕೆಲವು ಜನರು ಮಾತ್ರ ನಗರ ಮತ್ತು ಸ್ಥಳೀಯ ಚುನಾವಣೆಗಳ ಬಗ್ಗೆಯೂ ಗಮನಹರಿಸುತ್ತಾರೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ, ನಗರ ಚುನಾವಣೆಗಳಲ್ಲಿ ಮತದಾರರ ಜಾಗೃತಿ ಮತ್ತು ಇದರಿಂದಾಗಿ ಮತದಾನ ಮಾಡುವವರ ಸಂಖ್ಯೆ ಎರಡೂ ಕಡಿಮೆ ಇರುತ್ತೆ. ರಾಜ್ಯ ಸರ್ಕಾರಗಳು ಹೆಚ್ಚಿನ ಸ್ಥಳೀಯ ನಿರ್ಧಾರಗಳ ಮೇಲೆ ಅತಿಯಾದ ನಿಯಂತ್ರಣವನ್ನು ಹೊಂದಿದ್ದು ಇದರ ಪರಿಣಾಮವಾಗಿ ಬೆಂಗಳೂರಿನ ಬಿಬಿಎಂಪಿ ಚುನಾವಣೆ 2 ವರ್ಷದಿಂದ ನಡೆದಿಲ್ಲ. ಈವಾಗ ಅಂತಿಮವಾಗಿ ಜುಲೈ 2022 ರಲ್ಲಿ ಚುನಾವಣಾ ದಿನಾಂಕವನ್ನ ನಾವು ನಿರೀಕ್ಷಿಸುತ್ತಿದ್ದೇವೆ.ಕಾತ್ಯಾಯಿನಿ ಚಾಮರಾಜ್ ಅವರು ಸುಮಾರು 35 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿ ಮತ್ತು ನಗರ ಆಡಳಿತದ ವಿಷಯಗಳ ಬಗ್ಗೆ ಬರೆಯುತ್ತಿದ್ದಾರೆ ಮತ್ತು ಅದರ ಕುರಿತು ಕೆಲಸ ಮಾಡುತ್ತಿದ್ದಾರೆ. 2005 ರಿಂದ CIVIC ನ ಕಾರ್ಯನಿರ್ವಾಹಕ ಟ್ರಸ್ಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 'ನಾಗರಿಕ ಸಮಾಜ ವೇದಿಕೆ'ಯ ನೇತ್ರತ್ವದಲ್ಲಿ ಕಾತ್ಯಾಯಿನಿ ಮತ್ತು ಅವರ ಸಂಗಡಿಗರು ಸೇರಿ 'BBMP ಚುನಾವಣೆ 2022 ರ ಪ್ರಣಾಳಿಕೆ'ಯನ್ನು ತಯಾರಿಸಿದ್ದು, ಇದನ್ನು ಜೂನ್‌ನಲ್ಲಿ ನಗರ ಮತ್ತು ಕರ್ನಾಟಕ ರಾಜ್ಯದ ಪ್ರಮುಖ ರಾಜಕೀಯ ನಾಯಕರನ್ನು ಒಳಗೊಂಡ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಲಾಯಿತು. ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 143 ನೇ ಸಂಚಿಕೆಯಲ್ಲಿ ಕಾತ್ಯಾಯಿನಿಯವರು ಹೇಗೆ ಪ್ರಜಾಪ್ರಭುತ್ವವು ಚುನಾವಣೆಗಳೊಂದಿಗೆ ಕೊನೆಗೊಳ್ಳುವುದಿಲ್ಲ ಎಂದು, ಜೊತೆಗೆ ಜವಾಬ್ದಾರಿಗಳು, ಹೊಣೆಗಾರಿಕೆ ಮತ್ತು ಪಾರದರ್ಶಕತೆಯೊಂದಿಗೆ ನಡೆಯಬೇಕಾದ ಸಕ್ರಿಯ ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭೆಗಳ ಅಗತ್ಯತೆಗಳ ಕುರಿತೂ ತಿಳಿಸುತ್ತಾರೆ. ಅದರ ಜೊತೆಗೆ ಆಡಳಿತ ಅವಧಿಯಲ್ಲಿ ಹೇಗೆ ಊರಿನ ತಳಮಟ್ಟದ ನಾಗರಿಕರಿಗೂ ಕೂಡ ಅವರಿಗೆ ಅರ್ಹವಾದ ಸವಲತ್ತುಗಳು ...
    Show More Show Less
    1 hr and 10 mins
  • ಏಕಾಂಗಿ ಪಯಣ | Solo Travel in India ft. Ganesh Chakravarthi
    Jun 30 2022
    ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 142 ನೇ ಸಂಚಿಕೆಯಲ್ಲಿ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.Hosts Ganesh Chakravarthi and Pavan Srinath explore the joys of solo traveling and share their experiences on Episode 142 of the Thale-Harate Kannada Podcast.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಸಾಮಾನ್ಯವಾಗಿ ಸ್ನೇಹಿತರು, ಕುಟುಂಬ ಅಥವಾ ಪ್ರೀತಿಪಾತ್ರರ ಜೊತೆ ಹೋಗುವ ಗುಂಪು ಚಟುವಟಿಕೆ ಎಂದು ಭಾವಿಸುತ್ತೇವೆ. ಚಿಕ್ಕಂದಿನಲ್ಲೇ ತಂದೆ-ತಾಯಂದಿರ ಜೊತೆ ಪ್ರವಾಸ ಆರಂಭಿಸುವುದರಿಂದ ಈ ಯೋಚನೆ ನಮ್ಮ ಮನಸ್ಸಲ್ಲಿ ಬೇರೂರಿದೆ. ಆದರೆ, ಏಕಾಂಗಿ ಪಯಣವು ತನ್ನದೇ ಆದ ಸಂತೋಷ ಮತ್ತು ಆಕರ್ಷಣೆಗಳನ್ನು ಹೊಂದಿದೆ ಮತ್ತು ನೀವು ಈ ಹಿಂದೆ ಹೋದಂತಹ ಊರಿಗೆ ಮತ್ತೆ ಭೇಟಿ ನೀಡುತ್ತಿದ್ದರೂ ಸಹ ಸಂಪೂರ್ಣವಾಗಿ ವಿಭಿನ್ನ ಅನುಭವವನ್ನು ನೀಡುತ್ತದೆ.ಗಣೇಶ್ ಅವರು ಥಾಣೆಯಿಂದ ಪವನ್‌ ಅವರ ಜೊತೆ ಮಾತನಾಡ್ತಾ ಇದ್ದಾರೆ, ಅಲ್ಲಿ ಅವರು ಪ್ರಸ್ತುತ ಪುಣೆ, ಮುಂಬೈ ಮತ್ತು ಇತರ ಊರುಗಳ ಪ್ರಯಾಣದ ಕೊನೆಯ ಹಂತದಲ್ಲಿದ್ದಾರೆ. ಗಣೇಶ್ ಸುಮಾರು 13 ವರ್ಷಗಳಿಂದ ಬೈಕಿಂಗ್ ಮಾಡುತ್ತಿದ್ದು, ತಮ್ಮ ಮೊದಲ ಬೈಕ್ ಖರೀದಿಸಿದ ಕೆಲವೇ ತಿಂಗಳಲ್ಲಿ ದಕ್ಷಿಣ ಭಾರತದ ಉದ್ದಗಲಕ್ಕೂ ಏಕಾಂಗಿಯಾಗಿ ಬೈಕ್ ಟ್ರಿಪ್ ಮಾಡಿದ್ದಾರೆ.ಸಂಚಿಕೆಯ ಮೊದಲಾರ್ಧದಲ್ಲಿ, ಗಣೇಶ್ ಬೈಕ್ ಪ್ರಯಾಣದ ಬಗ್ಗೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ ಜೊತೆಗೆ ಬೈಕರ್‌ಗಳು ಮತ್ತು ಪ್ರವಾಸಿಗರು ಪ್ರಯಾಣಿಸುವಾಗ ಏನನ್ನು ನಿರೀಕ್ಷಿಸಬೇಕು ಮತ್ತು ತಯಾರಿ ಹೇಗಿರಬೇಕು ಎಂದು ತಿಳಿಸಿದ್ದಾರೆ. ದ್ವಿತೀಯಾರ್ಧದಲ್ಲಿ, ಗಣೇಶ್ ಮತ್ತು ಪವನ್ ಇಬ್ಬರೂ ಹೊಸ ನಗರಗಳಿಗೆ ತಮ್ಮ ಭೇಟಿಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬನ್ನಿ ಕೇಳಿ!ನೀವು ಎಲ್ಲಿಗಾದ್ರೂ ಏಕಾಂಗಿ ಪಯಣ ಮಾಡಿದ್ದೀರಾ? ಹಾಗಾದ್ರೆ, ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನಮ್ಮ ಜೊತೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ! ಅಲ್ಲದೆ, ಭಾರತದಲ್ಲಿ ದೂರದೂರಿಗೆ ಬೈಕ್ ಜರ್ನಿ ಮಾಡೋ ಯೋಚನೆ ಇದ್ರೆ, ಆ ಕುರಿತು ಸಲಹೆಗಳಿಗಾಗಿ ಗಣೇಶ್ ಅವರನ್ನು ಕೇಳಲು ಮರೆಯಬೇಡಿ.Travel and tourism are often thought of as group activities to do with friends, families or loved ones. This is ingrained in us as we often start traveling with our parents while still young. However, solo traveling has its own joys, attractions and offers a completely different experience even if you are visiting the same places. Ganesh joins Pavan from Thane, where he is currently on the last leg of his travels across Pune, Mumbai and elsewhere. Ganesh has been biking for about 13 years now, and has been going on solo bike trips across the length and breadth of South India from within months of getting his first bike. In the first half of the episode, Ganesh shares his personal experience of bike journeys, what he has enjoyed about them, and what aspiring bikers and travelers can both expect and need to prepare themselves for while traveling. In the second half, both Ganesh and Pavan share some insights from their experiences visiting new cities on their own. Tune in!Have you traveled on your own ...
    Show More Show Less
    57 mins
  • ರೂಬಿಕ್ಸ್ ಕ್ಯೂಬಿನಲ್ಲಿ ಚಿತ್ರಗಳು | A Puzzling Art ft. Mahesh Malpe
    Jun 16 2022
    ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ.Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 141 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಮಹೇಶ್ ಮಲ್ಪೆ ಅವರ ಜೊತೆ ರೂಬಿಕ್ಸ್ ಕ್ಯೂಬ್ ಮತ್ತು ರೂಬಿಕ್ಸ್ ಕ್ಯೂಬ್ ಕಲೆಯ ಕುರಿತು ಮಾತನಾಡಿದ್ದಾರೆ.ರೂಬಿಕ್ಸ್ ಕ್ಯೂಬ್ ಒಂದು ಅದ್ಭುತವಾದ ಒಗಟು. ಇದರಲ್ಲಿ ಕಲೆಗಾರಿಕೆ ಮತ್ತೊಂದು ವಿಸ್ಮಯ. ಈ ಕ್ಷೇತ್ರದಲ್ಲಿ ಮಿಂಚುತ್ತಿರುವ ಮಹೇಶ್ ಮಲ್ಪೆ ಅವರು ಇವತ್ತಿನ ಸಂಚಿಕೆಯಲ್ಲಿ ನಮ್ಮ ಜೊತೆ ಇದ್ದಾರೆ. ಇವರು ರೂಬಿಕ್ಸ್ ಕ್ಯೂಬ್ ಕಲೆ, ಇದರ ವಿಭಿನ್ನ ಪ್ರಯತ್ನಗಳು, ತಯಾರಿಕೆಯ ಬಗ್ಗೆ ಮಾತನಾಡುತ್ತಾರೆ. ಬನ್ನಿ ಕೇಳಿ!In episode 141 of the Thale-Harate Kannada Podcast, Host Ganesh Chakravarthi is in conversation with Mahesh Malpe about Rubik’s cube and Rubik’s cube mosaic art.Rubik's Cube is an enigma for many. There are some who can solve it within seconds. And then there are some who make works of art out of it. In this episode, we have Mahesh Malpe, a Rubik's Cube artist who has created some startling portraits that have gained international acclaim. In this episode, we talk about Rubik's Cubes, methods of solving them, and what goes on behind the elaborate settings for this art. Tune in!ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!See omnystudio.com/listener for privacy information.
    Show More Show Less
    37 mins
  • ಚಾರ್ಲಿಯ ತರಬೇತಿ ಪಯಣ | A Dog's Acting Journey ft. Pramod B C
    Jun 9 2022
    ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 140 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರಮೋದ್ ಬಿ ಸಿ ಅವರ ಜೊತೆ ನಾಯಿ ಮತ್ತು ಮನುಷ್ಯ ಸಂಭಂದಗಳ ಕುರಿತು ಜೊತೆಗೆ 777 ಚಾರ್ಲಿ ಚಿತ್ರದಲ್ಲಿ ನಾಯಿಯನ್ನ ತರಬೇತಿಗೊಳಿಸುವಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. ನಾಯಿ ಸಾಕುಪ್ರಾಣಿಗಳ ಪಟ್ಟಿಯಲ್ಲಿ ಮನುಷ್ಯನಿಗೆ ತುಂಬಾ ಹತ್ತಿರವಾದ ಪ್ರಾಣಿ. ಅವುಗಳು ಎಷ್ಟೇ ತರ್ಲೆ ಮಾಡಿದರೂ ತಮ್ಮ ಮಾಲೀಕರ ಮಾತನ್ನು ಕೇಳುವ ಗುಣ ಹೊಂದಿದೆ. ಈ ಸಂಚಿಕೆಯಲ್ಲಿ ಪ್ರಮೋದ್ ಅವರು ಯಾವ ರೀತಿ ನಾಯಿಗಳನ್ನ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ, ಜೊತೆಗೆ ನಾಯಿಗಳ ವರ್ತನೆಗಳ ಕುರಿತೂ ಮಾತನಾಡಿದ್ದಾರೆ. ಐಎಎಸ್ ಆಗಬೇಕೆಂದು ಹೋರಾಟ ಪ್ರಮೋದ್ ಅವರು ಪ್ರಾಣಿಗಳ ಲೋಕದಲ್ಲಿ ಬೆರೆತು ಹೋದ ಕತೆ ರೋಚಕವಾದದ್ದು ಹಾಗೆಯೇ ನಾವೆಲ್ಲರೂ ಕುತೂಹಲದಿಂದ ಎದುರು ನೋಡುತ್ತಿರುವ 777 ಚಾರ್ಲಿ ಸಿನೆಮಾದಲ್ಲಿ ಚಾರ್ಲಿ ಗೆ ತರಬೇತುದಾರನಾಗಿ ಕಳೆದ ಕ್ಷಣಗಳ ಕುರಿತು ನಮ್ಮೊಂದಿಗೆ ಹಂಚಿ ಕೊಂಡಿದ್ದಾರೆ. ಬನ್ನಿ ಕೇಳಿ!In episode 140 of the Thale-Harate Kannada Podcast, Host Ganesh Chakravarthi is in conversation with Pramod B C about the relationship between humans and dogs. Mr Pramod is known for training the dog Charlie from the upcoming movie 777 Charlie.The dog is the closest animal to a man on the pet list. Whatever they do, they have the ability to listen to their owners. In this episode, Pramod enlightens on how we should treat dogs, and also shares his thoughts on behavior of dogs. He talks about his journey as an animal trainer. Further, he also shares his working experience in the eagerly anticipated movie 777 Charlie. Tune in now!ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!See omnystudio.com/listener for privacy information.
    Show More Show Less
    1 hr and 23 mins
  • ಮಾಯಾಲೋಕ | A Magician's Muse ft. Prof Shankar
    May 26 2022
    ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಪ್ರದರ್ಶನ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ.Host Ganesh Chakravarthi is in conversation with Professor Shankar on magic shows and his journey in this field.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ತಲೆ ಹರಟೆ ಕನ್ನಡ ಪಾಡ್ಕ್ಯಾಸ್ಟ್ ನ 139 ನೇ ಸಂಚಿಕೆಯಲ್ಲಿ ನಿರೂಪಕ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಜಾದೂ ಮತ್ತು ಈ ಕ್ಷೇತ್ರದಲ್ಲಿ ಅವರ ಪಯಣದ ಕುರಿತು ಮಾತನಾಡಿದ್ದಾರೆ. ಮಾಯಾ, ಜಾದೂ, ಎಲ್ಲರಿಗೂ ಬಹಳ ಇಷ್ಟವಾದಂತಹ ಮನೋರಂಜನಾ ಮಾಧ್ಯಮ. ಆದರೆ ಇದು ಬರಿ ಮನೋರಂಜನೆಗೆ ಸೀಮಿತವಾದದ್ದಲ್ಲ. ಇದು ಅತ್ಯಂತ ಶ್ರಮ ಮತ್ತು ಅಭ್ಯಾಸ ಉಳ್ಳಂತಹ ಪ್ರದರ್ಶನ ಕಲೆ. ನಮ್ಮ ಈ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ಪ್ರೊಫೆಸರ್ ಶಂಕರ್ ಅವರ ಜೊತೆ ಈ ಒಂದು ಪ್ರದರ್ಶನ ಕಲೆಯ ಬಗ್ಗೆ, ಜಾದೂ ಪ್ರದರ್ಶನದ ವೃತ್ತಿ, ಮತ್ತು ಇದರ ವಿವಿಧ ಆಯಾಮದ ಬಗ್ಗೆ ಮಾತನಾಡುತ್ತಾರೆ. ಪ್ರೊಫೆಸರ್ ಶಂಕರ್ ಅವರು ಸುಮಾರು 50 ವರ್ಷಗಳಿಂದ ದೇಶದಾದ್ಯಂತ, ವಿಶ್ವದಾದ್ಯಂತ ಪ್ರದರ್ಶನಗಳನ್ನು ನೀಡಿ, ಹಲವಾರು ಪಾರಿತೋಷಕಗಳನ್ನು ಗೆದ್ದಿದ್ದಾರೆ. ಇವರು ಆರ್ಡರ್ ಆಫ್ ಮೆರ್ಲಿನ್ ಎಂಬ ಪ್ರತಿಷ್ಠಿತವಾದ ಪುರಸ್ಕಾರವನ್ನು ಕೂಡ ಗೆದಿದ್ದರೆ. ಈ ಸಂಚಿಕೆ ಪ್ರೊಫೆಸರ್ ಶಂಕರ್ ಅವರ ಪಯಣದ ಬಗ್ಗೆ. ಬನ್ನಿ ಕೇಳಿ!Magic, illusions are incredibly fascinating disciplines. There's a rigorous process of practice, playing with the senses, and creating wonders in front of the eyes behind the discipline.In episode 139 of the Thale-Harate Kannada Podcast, Host Ganesh Chakravarthi is in conversation with Professor Shankar, a Karnataka-based magician who has been performing for over 50 years in local, national, and international levels. He has won numerous awards for his shows and has also been honoured with the Order of Merlin, a very prestigious award in the field of magic.Prof Shankar takes us through his experiences, right from his childhood, his inspirations, and how he has come to view the art. Tune in!ಫಾಲೋ ಮಾಡಿ. Follow the Thalé-Haraté Kannada Podcast @haratepod. Facebook: https://facebook.com/HaratePod/, Twitter: https://twitter.com/HaratePod/ and Instagram: https://instagram.com/haratepod/.ಈಮೇಲ್ ಕಳಿಸಿ, send us an email at haratepod@gmail.com or send a tweet and tell us what you think of the show!You can listen to this show and other awesome shows on the new and improved IVM Podcast App on Android: https://ivm.today/android or iOS: https://ivm.today/ios and check out our website at https://ivmpodcasts.com/ .You can also listen to the podcast on Apple Podcasts, Spotify, Google Podcasts, Gaana, Amazon Music Podcasts, JioSaavn, Castbox, or any other podcast app. We also have some video episodes up on YouTube! ಬನ್ನಿ ಕೇಳಿ!See omnystudio.com/listener for privacy information.
    Show More Show Less
    50 mins